Ashish Saradka
Other
ಜೀವನದಲ್ಲಿ ಧನಾತ್ಮಕ (positive ) ಅಂಶಗಳನ್ನು ಹುಡುಕುವವರು ನೀವಾದ್ರೆ, ಎಂತಹ ವಿಷಮ ಪರಿಸ್ಥಿತಿ ಬಂದರೂ ನೀವು ಅದರಲ್ಲಿ ಒಂದು ಅವಕಾಶವನ್ನು ನೋಡ್ತೀರಾ. ಅದೇ ಋಣಾತ್ಮಕ ಚಿಂತನೆಗಳ ದಾಸರಾಗಹೊರಟರೆ ನಿಮಗೆ ಮೊಸರಲ್ಲೂ ಕಲ್ಲೇ ಕಾಣುತ್ತೆ. ಎಲ್ಲಾವೂ ಇದ್ದರೂ ಏನೂ ಇಲ್ಲದಂತೆ ಕೊರಗುವ, ಇನ್ನೂ ಬೇಕು, ಇನ್ನೂ ಬೇಕು ಅಂತಾ ಪರಿತಪಿಸುವ ಹಲವಾರು ಜನರನ್ನು ನಾವು ಪ್ರತಿದಿನ ನೋಡ್ತೀವಿ. ನಿಮ್ಮ ಯೋಚನಾ ಲಹರಿ ಆ ಕಡೆಗೇ ವಾಲುತ್ತಾ ಇದೆಯಾ...? ನಕಾರಾತ್ಮಕವಾಗಿ ಚಿಂತಿಸುವ ಜನರು ಮತ್ತು ಜಗತ್ತಿಗೆ ಒಂದು ಸ್ವಲ್ಪ positivityಯ ಟಾನಿಕ್ ಕೊಡುವ ಬಯಕೆ ನನ್ನದು. ನಿಮ್ಮೆಲ್ಲಾ ಸಮಸ್ಯೆಗೆ ಇಲ್ಲಿ ಖಂಡಿತವಾಗಿಯೂ ಉತ್ತರ ಸಿಗಲಾರದು. ಆದರೆ ಉತ್ತರ ಹುಡುಕುವ ಪಯಣಕ್ಕೆ ನಾವಿಕನಾಗಿ ಸಾಥ್ ಕೊಡೋಕೆ ನಾನಿರ್ತೀನಿ, ಒಬ್ಬ ಸ್ನೇಹಿತನಾಗಿ, ಅಣ್ಣನಾಗಿ, ತಮ್ಮನಾಗಿ ಮತ್ತು ಮಗನಾಗಿ! ಇಂತಿ ನಿಮ್ಮ ಪ್ರೀತಿಯ ಆಶಿಶ್ ಸಾರಡ್ಕ If you seek positive vibes and goodness in life, you will see opportunity in most adverse conditions. If you are driven by negativity, life becomes a challenge. Anxiety, depression, stress and hatred is driving people crazy. I want to make my bit of positive contribution to make this place a happier one. Lets row this boat of life. -Ashish Saradka